Yoga

ಅಂತರರಾಷ್ಟ್ರೀಯ ಯೋಗ ದಿನ 21-06-2025

“ಅಂತರರಾಷ್ಟ್ರೀಯ ಯೋಗ ದಿನ”ದ ಪ್ರಯುಕ್ತ ದಿನಾಂಕ: 21-06-2025ರಂದು ನಮ್ಮ ವಿದ್ಯಾ ಸಂಸ್ಥೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಶಿವರಾಮಯ್ಯನವರು ಹಾಗೂ ಉಪಪ್ರಾಂಶುಪಾಲರಾದ ಡಾ. ಸುರೇಶ್‌ ಕೆ., ಉದ್ಘಾಟಿಸಿದರು. ಗ್ರಂಥಪಾಲಕರಾದ ಶ್ರೀ ಮುನಿರಾಜ ಎ. ಅವರು ಯೋಗ ಕುರಿತು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ದ್ವಿತೀಯ ವರ್ಷದ ಪ್ರಶಿಕ್ಞಣಾರ್ಥಿ ಶ್ರೀಮತಿ. ರಂಜಿತಾರವರು ʼಯೋಗ ದಿನʼದ ಐತಿಹಾಸಿ ಹಿನ್ನಲೆಯನ್ನು ಪರಿಚಯಿಸಿದರು. ಬಿ.ಜಿ.ಎಸ್.‌ ಕಾಲೇಜಿನ ಉಪನ್ಯಾಸಕಿಯಾದ ಶ್ರೀಮತಿ ನಿರುಪಮ ಆರಾದ್ಯ ಅವರು ವಿವಿಧ ಯೋಗಾಸನಗಳನ್ನು ಪರಿಚಯಿಸಿದರು ಮತ್ತು ಪ್ರಶಿಕ್ಷಣಾರ್ಥಿಗಳಿಂದ ದೈನಂದಿನ ಅವಶ್ಯಕ ಯೋಗಾಸನಗಳನ್ನು ಮಾಡಿಸಿದರು. ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಕೆ.ಟಿ.ಎಸ್.ವಿ. ಸಂಘದ ಗೌರವ ಕಾರ್ಯದರ್ಶಿಗಳಾದ ಶ್ರೀ ಕೆಂಪಯ್ಯನವರು, ಕಾರ್ಯದರ್ಶಿಗಳಾದ ಶ್ರೀ ಎ. ಎನ್‌. ಕೃಷ್ಣಯ್ಯನವರು ಹಾಗೂ ನಿರ್ದೇಶಕರಾದ ಶ್ರೀ ಲಕ್ಷ್ಮಣ್‌ ಕೆ. ವಿ. ಅವರು ಆಗಿಮಿಸಿದ್ದರು. ಪ್ರಾಧ್ಯಾಪಕರಾದ ಡಾ. ಯೋಗೀಶ್‌ ಸಿ., ಶ್ರೀಮತಿ ಉಷಾ, ಸಂಚಾಲಕರಾದ ಡಾ. ಸುಹಾಸ್‌ ಬಿ. ಎಮ್.‌, ಡಾ. ರಮೇಶ ಕೆ. ವಿ., ಹಾಗೂ ವಿದ್ಯಾರ್ಥಿ ಸಂಚಾಲಕರಾದ ಮಹಂತೇಶ್‌ ಮತ್ತು ಪದ್ಮವತಿ, ಎರಡು ವರ್ಷಗಳ ಪ್ರಶಿಕ್ಷಣಾರ್ಥಿಗಳು, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.