
ರಾಜಾಜಿನಗರ ಶಿಕ್ಷಣ ಮಹಾವಿದ್ಯಾಲಯ,
ಕೆ.ಟಿ.ಎಸ್.ವಿ ಸಂಘ,5ನೇ ಬ್ಲಾಕ್, ರಾಜಾಜಿನಗರ,ಬೆಂಗಳೂರು -10
ಕರ್ನಾಟಕ ತಿಗಳರ ಸಾರ್ವಜನಿಕ ವಿದ್ಯಾಭಿವೃದ್ಧಿ ಕೆ,ಟಿ.ಎಸ್.ವಿ ಸಂಘದ ಅಡಿಯಲ್ಲಿ ನಡೆಯುತ್ತಿರುವ, ಶಿಕ್ಷಣದ ಪದವಿ ಕಾಲೇಜು.ಈ ಸಂಸ್ಥೆಯು 1986ರಲ್ಲಿ ಆರಂಭವಾಗಿದೆ. ಇದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದಿಂದ ಅನುಮೋದಿಸಲ್ಪಟ್ಟಿದೆ. ಹಾಗೂ ಯುಜಿಸಿಯ ನಿಯಮಾವಳಿಗಳ ಪ್ರಕಾರ ಹಾಗೂ ಯುಜಿಸಿ ನ್ಯಾಕ್‍ನಿಂದ B ದರ್ಜೆಯಲ್ಲಿ ಅಕ್ರಿಡಿಯೇಷನ್ ಹೊಂದಿರುತ್ತದೆ. ಇದು ಕರ್ನಾಟಕದಲ್ಲಿಯೇ ಏಕೈಕ ಸ್ಥಳಿಯ ಭಾಷಾ ಮಾಧ್ಯಮದಲ್ಲಿ ಶಿಕ್ಷಕರ ತರಬೇತಿಯನ್ನು ನೀಡಿರುತ್ತಿರುವ ಮಹಾವಿದ್ಯಾಲಯವಾಗಿರುತ್ತದೆ .ಈ ಸಂಸ್ಥೆಯು 1995ರಿಂದ ಅನುಧಾನಕೊಳಪಟ್ಟಿದೆ. ಪ್ರಾರಂಭವಾದ ಸಾಲಿನಿಂದಲೂ ಇಲ್ಲಿಯವರೆಗೆಗೂ ಸಹ ಉತ್ತಮವಾಗಿ ನೂರಕ್ಕೆ ನೂರರಷ್ಟು ಫಲಿತಾಂಶವನ್ನ ಪಡೆಯುತ್ತಾ ಬಂದಿದೆ .ಹಾಗೂ ಸುಮಾರು ನಾಲ್ಕುಸಾವಿರಕ್ಕೂ ಮೇಲ್ಪಟ್ಟು ಶಿಕ್ಷಕರನ್ನು ತರಬೇತಿಗೊಳಿಸಿರುವ ಹೆಗ್ಗಳಿಕೆ ಈ ಸಂಸ್ಥೆಯದ್ದಾಗಿದೆ.ಈ ಸಂಸ್ಥೆಯು ಉತ್ತಮವಾದ ಮೂಲಭೂತ ಸೌಕರ್ಯಗಳು ಕಾಲೇಜಿನ ಗ್ರಂಥಾಲಯವು ಉತ್ತಮ ಪಠ್ಯಪುಸ್ತಕ/ಗ್ರಂಥಗಳು ಹಾಗೂ ಇ-ಜರ್ನಲ್ ಒಳಗೊಂಡಿದೆ .ಹಾಗೂ ಮನೋವಿಜ್ಞಾನ, ವಿಜ್ಞಾನ, ಸಮಾಜವಿಜ್ಞಾನ, ಕಂಪ್ಯೂಟರ್ ಮತ್ತು ಭಾಷಾ ಪ್ರಯೋಗ ಶಾಲೆಯನ್ನು ಒಳಗೊಂಡಿರುತ್ತದೆ. ಉತ್ತಮ ಅನುಭವ ಹಾಗೂ ಶೈಕ್ಷಣಿಕ ಪಧವಿಯನ್ನು ಹೊಂದಿದ ಬೋಧಕವರ್ಗ ಸರಿ ಸುಮಾರು ನಾಲ್ಕು ಜನ ಡಾಕ್ಟರೇಟ್ ಪದವಿಯನ್ನು ಹೊಂದಿರುತ್ತಾರೆ , ಹಾಗೂ ನಾಲ್ಕು ಜನ ಅಸೊಸಿಯೇಟ್ ಪ್ರೊಫೆಸರ್ ಗ್ರೇಡಿನಲ್ಲಿ ಹಾಗೂ ನಾಲ್ಕು ಜನ ಎಂ.ಫಿಲ್ ಪಧವಿಯನ್ನು ಹೊಂದಿರುತ್ತಾರೆ. ಇಬ್ಬರು ಎಂ.ಫಿಲ್ ಹಾಗೂ ಪಿ.ಹೆಚ್.ಡಿಯನ್ನು ಹೊಂದಿದ್ದ ಸರಿ ಸುಮಾರು ಮೂವತ್ತು ವರ್ಷಗಳ ಅನುಭವವನ್ನ ಹೊಂದಿರುವಂತಹ ಬೋಧಕ ವರ್ಗವನ್ನು ಒಳಗೊಂಡಿದ್ದ. ಕಾಲೇಜಿನಿಂದ ಪದವಿ ಪಡೆದ ಪದವೀದರರು ಹೊರಗಿನ ಸಮಾಜದಲ್ಲಿ ಉನ್ನತ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಯಲ್ಲಿ ಉತ್ತಮ ಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಕಾಲೇಜಿಗೆ ಒಂದು ಹೆಮ್ಮೆಯ ವಿಷಯವಾಗಿದೆ. ಹೀಗೆ ಶಿಕ್ಷಕರ ತರಬೇತಿಯನ್ನು ನೀಡುವುದರ ಮೂಲಕ ಉತ್ತಮ ನಾಗರಿಕ ಹಾಗೂ ಉತ್ತಮ ರಾಷ್ಟ್ರನಿರ್ಮಾಣದಲ್ಲಿ ಈ ಸಂಸ್ಥೆಯು ಸತತ ಪರಿಶ್ರಮದ ಮೂಲಕ ನೀಡಿ ರಾಷ್ಟ್ರನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿದೆ.